ಈ ಪುಟವನ್ನು ಪ್ರಕಟಿಸಲಾಗಿದೆ

"ಬಾ ಕಂಠಿ.....ಹೋಗೋಣ....ಜನರಿಂದ....ದೂರ ವಾಗಿ, ನಿರ್ಜನ ಬೀದಿ ಇದ್ದರೆ ಆ ಹಾದೀಲಿ,ಹೊರಟು ಹೋಗೋಣ."

"ಎಲ್ಲಿದೆ ಕಾರು?"

"ಅಲ್ಲೇ ನಿಂತಿದೆ. ಮನೆಗೆ ತಾನೆ?"

"ನಮ್ಮನೇಗಲ್ಲ. ಶಾರದಾ ನೆನಪು ಆಗದ ಹಾಗೆ ನಿಮ್ಮನೇಗೆ ಹೋಗೋಣ. ಇದು ಸ್ವಾತಂತ್ರ್ಯದ ರಾತ್ರಿ....ಅಲ್ಲ, ಸ್ವಾತಂತ್ರ್ಯದ ಬೆಳಗು...."

ನಾನು ವ್ಹೀಲಿನ ಬಳಿ ಕುಳಿತೆ. ಅವನು ಹಿಂಬದಿಯಲ್ಲಿ ಉರುಳಿ ಕೊಂಡ.

"ಚಂದ್ರೂ.......ಏನಾದರೂ ಹಾಡೋ ದೊರೆ."

"ಕತ್ತೆಗಳು ಕಾರ್ನ ಅಟ್ಟಿಸ್ಕೊಂಡು ಬರಬಹುದು!"

....ನಾನು ಎಚ್ಚೆತ್ತಿದ್ದೆ;ಆದರೆ ಶ್ರೀಕಂಠ ನಿದ್ದೆ ಹೋಗಿದ್ದ.

....ಇನ್ನೂ ನಾನು ಈ ರಾತ್ರೇ ಎಚ್ಚೆತ್ತೇ ಇದ್ದೇನೆ.ಆದರೆ ಈ ದಿನ ಇಲ್ಲಿಗೆ ಈ ಕಥೆಯನ್ನು ನಿಲ್ಲಿಸಬೇಕು.ದೇಶದ ಇತಿಹಾಸದಲ್ಲಿ ಒಂದು ಅಧ್ಯಾಯ ಮುಗಿಯಿತು.ಆ ದಿನ-ಸ್ವಾತಂತ್ರ್ಯ ಬಂದ ದಿನ. ಅದೊಂದು ಮುಖ್ಯ ಮೈಲಿಗಲ್ಲು.

ನನ್ನ ಜೀವನದಲ್ಲಿ ಸರಿಯಾಗಿ ಅಳತೆ ಮಾಡಿ ಮೈಲುಗಲ್ಲುಗಳನ್ನು ಹಾಕಿಯೇ ಇಲ್ಲ.ಅದು ಸಿಮೆಂಟ್ ಕಾಂಕ್ರೀಟಿನ ನೇರವಾದ ರಸ್ತೆಯಾಗಿರಲೇ ಇಲ್ಲವಲ್ಲ! ಹಾಗಿರುತ್ತ,ಸ್ವಾತಂತ್ರ್ಯ ದಿನದಂದು ನನ್ನ ಜೀವಿತ ವೃತ್ತದ ಒಂದು ಅಧ್ಯಾಯವನ್ನು ನಾನು ಮುಗಿಸಿದರೆ ತಪ್ಪಾಗಲಾರದು-ಅಲ್ಲವೇ?ಯಾರೂ ತಪ್ಪೆಣಿಸಲಾರರು-ಅಲ್ಲವೇ?

ಇನ್ನು ಎರಡು ದಿನಗಳುಳಿದಿವೆ-ನಾಳೆಮತ್ತು ನಾಡದು. ಅನಂತರದ ಅನಂತ ವಿಸ್ತಾರ ಎಷ್ಟೊಂದು ಮೋಹಕವಾಗಿದೆ!

ಕನಸು ಕಾಣುವುದರಲ್ಲಿ ಒಂದು ರೀತಿಯ ಸೊಗಸಿರುತ್ತದೆ. ನಾನು ಬಲ್ಲೆ.ಹಲವರ ಪಾಲಿಗಿರುವ ಭಾಗ್ಯ ಅದೊಂದೇ.

ನಾನು ಮಾತ್ರ ಇನ್ನು,ಬಾರಿ ಬಾರಿಗೂ ಕನಸು ಕಾಣ