ಈ ಪುಟವನ್ನು ಪ್ರಕಟಿಸಲಾಗಿದೆ

ಮೂರು ಬಾರಿ. ಆದರೆ ಆ ಬಗ‍್ಗೆ ಅಭಿಮಾನದಿಂದ ಹೇಳುವುದು ಸಾಧ್ಯವಿತ್ತೆ?.... ಸ್ವಾತಂ‍ತ್ರ್ಯತಂದ ದೇಶಭಕ್ತರು, "ನಾನು ಜೈಲಲ್ಲಿ ದಾಗ" ಎಂದು ಅಭಿಮಾನದಿಂದ ಮಾತನಾಡುವುದು ಸಾಮಾನ್ಯ ವಾಗಿತ್ತು. ಈಗ ಕೆಂಪು ಬಾವುಟದ ಜನ, ಲಾಕಪ್ಪು-ಜೈಲುಗಳ ಬಗ್ಗೆ ಸಲಿಗೆಯಿಂದ ಮಾತನಾಡುತಿದ್ದರು.ಆದರೆ ನಾನು?

ಶ್ರೀಕಂ‍‍‍‍‍ಠ ಬೊಂಬಾಯಿಂದ ಬಂದ. ಮಗ ನಾಗರಾಜನಿಗಾಗಿ

ನೂರಾರು ಆಟದ ಸಾಮಾನುಗಳನ್ನು ಅವನು ತಂದಿದ್ದ. ಶಾರದೆಗಾಗಿ ಸೀರೆಗಳನ್ನೂ ಕೂಡಾ.

ಮುಂಬಯಿ ಪ್ರವಾಸದ ವರದಿ

ಚುಟುಕಾಗಿತ್ತು.

"ನಿನಗೆ ಆಶ್ಚರ್ಯವಾದೀತು ಚಂದ್ರೂ....ಖುಷಿಯಾಗಿರೋಕೆ

ಪುರಸತ್ತೇ ಆಗ್ಲಿಲ್ಲ."

"ಏನಾದರೂ ವ್ಯಾಪಾರ

ಕುದುರ್ತೇನು?"

"ಪರವಾಗಿಲ್ಲ. ಇಂಡೊನೇಷ್ಯಾದಿಂದ ಒಂದಷ್ಟು ಆರ್ಡರು

ಬರತ್ತೆ...."

"ಶುಭ ವಾರ್ತೆ."

"ಹೊಸ ಯಂತ್ರಗಳಿಗೆ ಆರ್ಡರು ಬೇರೆ ಕೊಟ್ಟು ಬಂದಿದೀನಿ."

"ಹುಂ."

"‍‍‍‍‍‍‍ಆದಕ್ಕಿಂತಲೂ ಮುಖ್ಯ ವಿಷಯಾತಂದರೆ, ಬೊಂಬಾಯಿನ

ಎರಡು ಮೂರು ಮಿಲ್ ಗಳವರ ಜತೇಲಿ ನಾನು ಬೆಳೆಸಿರೋ ಸ್ನೆಹ...."

ಅದಾದ ಮೆಲೆ ನಾಲ್ಕಾರು ದಿನ ಎಡೆಬಿಡದ ಚಟುವಟಿಕೆಗಳಲ್ಲಿ

ಶ್ರೀಕಂಠ ನಿರತನಾದ. ಮಿಲ್ ಮಾಲೀಕರ ಸಭೆಗಳು ಜರಗಿದವು.... ಸಭೆಗಳಲ್ಲಿ ತೀರ್ಮಾನಗಳಾದವು.

ಮೂರನೆಯ ಷಿಫ್ಟ್ ನಿಲ್ಲಿಸುವುದು; ಮೂರರಲ್ಲಿ ಎರಡಂಶ

ಕಾಮಿಕರಿಗೆ ಕೆಲಸದಿಂದ ವಜಾ; ಉಳಿದವರ ತುಟ್ಟಿಭತ್ತೆಯಲ್ಲಿ ಕಡಿತ.

....ಆನಂತರದ ಘಟನೆಗಳನ್ನು ನಾನು ನಿರೀಕ್ಷಿಸಿದೆ.

"ಈ ಸಾರೆ ಯೂನಿಯನ್ನ ಪುಡಿಮಾಡ್ತೀವಿ. ಕೆಂಪು ಬಾವುಟ