ಈ ಪುಟವನ್ನು ಪ್ರಕಟಿಸಲಾಗಿದೆ

" ನಿನಗೆ ನಾನು ಸರಿಯಾದ ಜೋಡಿ ಅಲ್ಲವೇನೋ ಅಂತ

ಭಾಸವಾಗ್ತಿದೆ."

"ಸುಮ್ಮನೆ ಇಲ್ಲದ ಯೋಚ್ನೆ ಮಾಡಬೇಡ."

"ಶ್ರೀಕಂಠ ನನ್ನನ್ನು ನನ್ನ ಮನೆಯ ತನಕ ಒಯ್ದು ಮುಟ್ಟಿಸಿ,

ಒಬ್ಬನೇ ಎಲ್ಲೋ ಹೊರಟುಹೋದ.

ಬಟ್ಟೇಬರೆ ಕಳಚಿ ತಣ್ಣೀರಿನ ಸ್ನಾನಮಾಡಿ. ತಪ್ತವಾಗಿದ್ದ

ದೇಹ ತಣ್ಣಗಾಯಿತು. ಆದರೆ ಹೃದಯ ಬೇಗುದಿ ಕಡಿಮೆ ಯಾಗಲಿಲ್ಲ.

ಆ ಇಪ್ಪತ್ತು ಸಹಸ್ರ ಕೆಲಸಗಾರರ ಮಕ್ಕಳು ಮುದುಕರ

ಹೆಂಗಸರು ಗಂಡಸರ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ಸಾಗುತ್ತಿರ ಬಹುದು.... ಈ ಬೀದಿಯಲ್ಲಿ ಬರಬಹುದು ಸ್ವಲ್ಪ ಹೊತ್ತಿನಲ್ಲೆ.... ಅ ಮೇಲೆ ಅವರ ಸಭೆ...

ಆ ಘೋಷಗಳು..... ಮೊದಲು ಮೆಲ್ಲನೆ ಬಳೆಕ ಗಟ್ಟೆಯಾಗಿ

ಅವು ಕೇಳಿಸ ತೊಡಗಿದವು :

"ಒಬ್ಬನೆ ಒಬ್ಬನನ್ನು ಕೆಲಸದಿಂದ ತೆಗೆಯಬಾರದು !"

" ಸಾಮಾನಿನ ಬೆಲೆ ಇಳಿಸಿ !"

" ತುಟ್ಟ ಭತ್ತೆಯಲ್ಲಿ ಕಡಿತ ಕೂಡದು !"

"ಮಾಲೀಕರ ದಬ್ಬಾಳಿಕೆ ಕೊನೆಗಾಣಲಿ !"

"ಸ್ವರಾಜ್ಯ ಯಾರದು? ಬಡವರದು!"

.........ದೊಡ್ದದೊಂದು ಕೆಂಪು ಬಾವುಟ ಮೆರವಣಿಗೆಯ

ಮುಂಭಾಗದಲ್ಲಿ ಎತ್ತರವಾಗಿ ಹಾರಾಡುತಿತ್ತು. ಮುಂದುಗಡೆ ಎಲ್ಲ ಮುಖಂಡರು ಇರಲಿಲ್ಲ. ಸಭೆಯ ಏರ್ಪಾಟಿನಲ್ಲಿದ್ದರೇನೊ..... ಆದರೆ, ಮೆರವಣಿಗೆಯ ಮೊದಲ ನೂರು ಗಜದೊಳಗೆ ನಾರಾಯಣ ನಿದ್ದ.....

ಕಿಟಕಿಯಿಂದ ಹೊರಗಿಣಿಕಿ ನೋಡುತ್ತಿದ್ದ ನಾನು, ಆಕಸ್ಮಿಕ

ವಾಗಿಯಾದರು ಆತ ನನ್ನನ್ನು ಕಾಣಬಾರದೆಂದು, ಕಿಟಕಿಯನ್ನು ಅರ್ಧ ಮುಚ್ಚಿದೆ. ಆ ಬಳಿಕ ಉಳಿದವರು... ಬೊಂಬಾಯಿಯಲ್ಲಿ