ಈ ಪುಟವನ್ನು ಪ್ರಕಟಿಸಲಾಗಿದೆ

ಮನುಷ್ಯನಾಗಿ ಮಾರ್ಪಡಿಸಲು ಆತ ಯತ್ನಿಸುತ್ತಿದ್ದ. ಅದು ನನಗೆ ತಿಳಿದಿತ್ತು. ಆ ತಿಳಿವಳಿಕೆಯಿಂದ ನನಗೆ ದುಃಖವಾಗುತ್ತಿತ್ತು.

ನಾಲ್ಕಾರು ದಿನ ತಂದೆ ಕೆಲಸಕ್ಕೇ ಹೋಗಿರಲಿಲ್ಲ. ಪ್ರತಿ ಮಧ್ಯಾಹ್ನವೂ ಸಂಜೆಯೂ " ಯಾಕಪ್ಪ ? ಯಾಕೆ ?" ಎಂದು ಕೇಳುತ್ತಲಿದ್ದೆ.

"ಹೀಗೇ ಚಂದ್ರು, ಯಾಕೊ ಹೋಗಿಲ್ಲ ಅಷ್ಟೆ."

ಕೊನೆಗೆ ಆತ ನಿಜ ಸಂಗತಿಯನ್ನು ಹೇಳಿದ. ರಸ್ತೆಗಳ ಕೆಲಸ ಮುಗಿದಿತ್ತು. ಅವರೊಡನೆ ಸಂಪಾದನೆಗೂ ವಿರಾಮ ಒದಗಿತ್ತು. ಮುಂದೇನಾಗುವುದೋ ಎಂದು ನಾನು ಅಳುತಿದ್ದೆ. ಹತ್ತು ಹನ್ನೊಂದನೆಯ ವಯಸ್ಸಿನಲ್ಲಿ ಈಗಿನ ಎಷ್ಟು ಹುಡುಗರಿಗೆ ಮನೆತನದ ಜವಾಬ್ದಾರಿ ಅರ್ಥವಾಗುವುದೋ ಏನೋ, ಆದರೆ ನನಗೆ ಆಗ ಅರ್ಥವಾಗ ತೊಡಗಿತ್ತು.

ಅಜ್ಜಿ ಎಲ್ಲವನ್ನೂ ಗ್ರಹಿಸಿಕೊಂಡರು. ಆದರೆ ಪರಕೀಯನಾದ ನನ್ನನ್ನು ತನ್ನ ಮಗುವಿನಂತೆ ಪ್ರೀತಿಸತೊಡಗಿದ್ದ ಆಕೆ, ನಮ್ಮನ್ನು ದೂರವಿಡಲಿಲ್ಲ.

" ಫ್ಯಾಕ್ಟ್ರೀಲಿ ಕೆಲಸ ಸಿಗುತ್ತೇನೊ ನೋಡ್ಬಾರ್ದ್ದೆ ? ಹೊಸದಾಗಿ ಯಾವುದೊ ಫ್ಯಾಕ್ಟ್ರೀ ಕಟ್ಟಸ್ತ ಇದಾರಂತಲ್ಲಾ ?"

ಕಟ್ಟಿಸುತ್ತಾ ಇದ್ದರೆಂಬುದು ನಿಜ. ಊರಿಗೆ ಊರೇ ಆ ಮಾತನ್ನಾಡುತ್ತಿತ್ತು. ತಂದೆಯ ಜೊತೆಯಲ್ಲಿ ಅದೇ ರಸ್ತೆಯಮೇಲೆದುಡಿಯುತ್ತಿದ್ದವರೆಲ್ಲಾ ಅಲ್ಲಿಗೆ ಆಗಲೆ ಹೋಗಿದ್ದರು. ಆದರೆ ತಂದೆ ಯೊಬ್ಬನೇ, ಅರ್ಥವಿಲ್ಲದ ಮೂಕವೇದನೆಗೆ ಬಲಿಯಾಗಿ ವಿಶ್ರಾಂತಿ ಪಡೆಯುತ್ತಿದ್ದ.

" ಹೂ, ಹೋಗಿ ನೋಡ್ತೀನಿ."

ಉಣ್ಣಲು ತಿನ್ನಲು ಬೇಕಷ್ಟು ಇದ್ದರೆ, ಆಗಾಗ್ಗೆ ವಿಶ್ರಾಂತಿ ಪಡೆಯಬಹುದು. ಆದರೆ ನನ್ನ ತಂದೆಯಂತಹ ಶ್ರಮಜೀವಿ ಸೋಮಾರಿಯಾಗುವಿದು ಯಾವ ನ್ಯಾಯ? ಆದರೆ ಸೋಮಾರಿ ಯಾಗಲು ಅವನು ಇಷ್ಟಪಟ್ಟಿರಲಿಲ್ಲ. ಊರು ಅವನನ್ನು ಕರೆಯು