ಈ ಪುಟವನ್ನು ಪ್ರಕಟಿಸಲಾಗಿದೆ

ಹಗಲು ಹೊತ್ತು. ಆ ಕಣ್ಣುಗಳಲ್ಲಿ ಬೆಳಕಿರಲಿಲ್ಲ. ಆದರೆ ಅಂತಹದೊಂದು ವಾಹನದೊಳಗೆ ನಾನು ಕುಳಿತಿದ್ದೆ-ನನ್ನ ಜೀವಮಾನದಲ್ಲೇ ಮೊದಲ ಬಾರಿ ಕಾರಿನೊಳಗೆ ಕುಳಿತಿದ್ದೆ.

ನಾನು ಹಾದಿಯ ನಿರ್ದೇಶಗಳನ್ನು ತೊಡುತ್ತಾಬಂದೆ. ನನಗೆ ನನ್ನ ಆತ್ಮ ವಿಶ್ವಾಸದ ಬಗ್ಗೆ ಹೆಮ್ಮೆ ಎನಿಸಿತು. ಆ ಹೊಸ ಪರಿಚಯ, ಶ್ರೀಮಂತಿಕೆಯ ಆವರಣ, ನನ್ನನ್ನು ಆಧೀರನಾಗಿ ಮಾಡಿರಲಿಲ್ಲ.ನೇರವಾದ ರಸ್ತೆಯಲ್ಲಿ ಕಾರು ಓಡುತ್ತಿದ್ದಾಗ ಅವರು ಕೇಳಿದರು.

"ಯಾವ ಕ್ಲಾಸ್ ನಲ್ಲಿ ಓದ್ತಾ ಇದ್ದೀಯ ಮಗು?"

"ಫೋರ್ತ್ ಫಾರಂ ಸಾರ್."

ಅವರು, ನನ್ನ ಕ್ರಾಪಿನಿಂದ ಹಿಡಿದು ಪಾದದ ತನಕ ದೃಷ್ಟಿ ಹಾಯಿಸಿದವರು. ಅಂತಹ ಪರೀಕ್ಷೆಯಿಂದ ಯಾವಾಗಲೂ ನನಗೆ ಕಸಿವಿಸಿಯಾಗುತ್ತಿತ್ತು. ನನ್ನ ಬಟ್ಟಿಬರೆ ಯಾವಾಗಲೂ ನಾನು ಹುಟ್ಟದ ವರ್ಗವನ್ನೂ ನನ್ನ ಆರ್ಥಿಕ ಇರುವಿಕೆಯನ್ನೂ ಬಯಲು ಮಾಡುತ್ತಿತ್ತು.

ನಾವು ಹೆಡ್ ಮಾಸ್ಟರವರ ಮನೆ ಸೇರಿದೆವು. ಆ ದೊಡ್ಡ ಮನುಷ್ಯರು ಕೆಳಕ್ಕಿಳಿದು, "ಹಲೋ ರಂಗ" ಎನ್ನುತ್ತಾ ಬಲು ಸಲಿಗೆಯಿಂದ ಮಾತನಾಡಿದರು. ಪಕ್ಕಕ್ಕೆ ತಿರುಗಿ, "ಡ್ರ್ಯೆವರ್ ಇವರ್ನವ್ ಸ್ಕೂಲಿಗೆ ಬಿಟ್ಬಟ್ಟು ಬಾ" ಎಂದರು. ನನ್ನನ್ನು ನೋಡಿದ ನನ್ನ ವಿದ್ಯಾ ಗುರುವಿಗೆ ನಾನು ವಂದಿಸಿದೆ.

"ಯಾರು ಚಂದ್ರಶೇಖರನಾ?" ಪರವಾಗಿಲ್ಲ, ನಡಕೊಂಡು ಹೋಗ್ತಾನೆ" ಎಂದು ಅವರು ರಾಗವೆಳೆದರು.

ಛೆ! ಛೆ! ಕಾರ್ ನಲ್ಲೆ ಹೋಗ್ಲಿ. ತುಂಬ ಒಳ್ಳೇ ಹುದುಗ."

ಆಗ ನನ್ನ್ ವಿದ್ಯಾಗುರುವಿನ ಚರೆಯಲ್ಲಿ ಸ್ವಲ್ಪ ಬದಲಾವಣೆ ಯಾಯಿತು.

"ಹೌದು, ಹೌದು. ಅವನು ನನ್ನ್ ಒಳ್ಳೇ ವಿದ್ಯಾರ್ಥಿ."

ನಾನಾಗಿಯೇ ನಡುವೆ ಬಾಯಿಹಾಕಿ, "ಪರವಾಗಿಲ್ಲಾ ಸಾರ್ ನಡಕೊಂಡೇ ಹೋಗ್ತೀನಿ." ಎಂದೆ. "ಇನ್ನೊ ಟೈಮ್ ಇದೆ,"