ಈ ಪುಟವನ್ನು ಪ್ರಕಟಿಸಲಾಗಿದೆ

ವಾಗಿತ್ತು, ಆ ಹುಡುಗ ನಮ್ಮಿಬ್ಬರಿಗೂ ನಡುವೆ ಹಿಂಬದಿಯಿಂದ ಬಂದು, ಅವರ ಷರಾಯಿಯ ಜೇಬಿಗೆ ಕೈಹಾಕಿ ಹಣದ ಪಾಕೀಟು ಹೊಡೆದಿದ್ದ, ಸಾಮಾನ್ಯವಾಗಿ ಕೋಟಿನ ಬಳಿಗೆ ಹೃದಯಕ್ಕೆ ತಾಗಿಯೇ ಬೆಚ್ಚಗೆ ಇಡಬೇಕಾಗಿದ್ದ ಆ ಚೀಲವನ್ನು ಅದೇಕೆ ಆ ಮಹಾನುಭಾವರು ಷರಾಯಿಯ ಜೇಬಿನಲ್ಲಿ ಇಟ್ಟಿದ್ದರೋ! ನನಗೆ ಆ ಹುಡುಗನ ಪರಿ ಚಯವಿತ್ತು, ಆತ ಹಿಂದೆ ಪತ್ರಿಕೆ ಮಾರುತ್ತಿದ್ದನಂತೆ. ಆದರೆ ವೃದ್ಧೆಯಾದ ತಾಯಿಯನ್ನೂ ತಂಗಿಯನ್ನೂ ಸಾಕಬೇಕಾದ ಅವಶ್ಯತೆ ಹೆಚ್ಚು ಸಂಪಾದನೆಯ ಆ ಕೆಲಸಕ್ಕೆ ಅವನನ್ನು ನೂಕಿತ್ತು.

ಆ ದೊಡ್ಡಮನುಷ್ಯರು, ಮನೆಗೆ ಬೆಂಕಿಹತ್ತಿಕೊಂಡವರು ಕಿರು ಚುವಹಾಗೆ, ಬೊಬ್ಬಿಟ್ಟರು. ಅವರ ನಡೆಗೋಲು ಎತ್ತರಕ್ಕೆ ಆಕಾಶದಲ್ಲಿ ಅತ್ತಿತ್ತ ಬೀಸತೊಡಗಿತು. ಇನ್ನು ದೂರ ಸರಿಯುವುದೇ ಮೇಲೆಂದು ನಾನು ಅಲ್ಲಿಂದ ಹೊರಟೆ. ಆಗ ಅವರು ನನ್ನನ್ನು ಹಿಡಿದರು. ತಪ್ಪಿಸಿಕೊಂಡು ಓಡಿಹೋಗಬಹುದಾಗಿತು, ಆದರೆ ನಿರಪರಾಧಿಯಾದ ನಾನು ಹಾಗೆ ಯಾಕೆ ಮಾಡಬೇಕು? ಎರಡು ನಿಮಿಷಗಳಲ್ಲೆ ಪೋಲೀಸರು ಬಂದು ನನ್ನನ್ನು ತಮ್ಮ ವಶಪಡಿಸಿ ಕೊಂಡರು. ನಿಜವಾಗಿಯೂ ಕದ್ದಿದ್ದ ಹುಡುಗನನ್ನು ನಾನು ತೋರಿಸಿ ಕೊಡಬಹುದಾಗಿತ್ತು, ಆತ ಓಡಿಹೋಗಿರಲಿಲ್ಲ, ಬೀದಿಯ ಆಚೆ ನಿಂತು ನನ್ನನ್ನೆ ನೋಡುತ್ತಿದ್ದ, ಆದರೆ ನಾನು ಹಾಗೆ ಮಾಡಲಿಲ್ಲ. ಆ ಘಟನೆಯಿಂದ ಚಕಿತನಾಗಿದ್ದ ನಾನು ಹುಡುಗ ಮಾಡಿದ್ದುದು ಅಪರಾಧವೆ ಅಲ್ಲವೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ,

ಪೋಲೀಸರು ಬೀದಿಯಲ್ಲೆ ನನ್ನ ಕೆನ್ನೆಗೆ ಏಟು ಬಿಗಿದರು. ಬೆನ್ನಿಗೆ ಗುದ್ದಿದರು. ಕಳೆದುಹೋದ ಪಾಕೀಟಿಗಾಗಿ ನನ್ನಮೇಲೆ ಕೈಯಾಡಿ ಸಿದರು. ಏನೂ ಸಿಗದೆಹೋದಾಗ ಹಿಡಿದು ಠಾಣೆಗೆ ಬಿಯ್ದರು. ಹಣ ಕಳೆದುಕೊಂಡು, ಹತ್ತಾರೂ ನೂರಾರು ರೂಪಾಯಿಗಳಮಟ್ಟಿಗೆ ಬಡವರಾಗಿದ್ದ ಆ ಶ್ರೀಮಂತರತ್ತ ನಾನು ನೋಡಲೇ ಇಲ್ಲ.

ಪೋಲೀಸು ಠಾಣೆಯಲ್ಲಿ ನನ್ನನ್ನು ಲಾಕಪ್ಪಿನಲ್ಲಿಟ್ಟರು.

ಪೋಲೀಸಿನ ಮಿಾಸೆ ಮುನಿಯಪ್ಪ ಬಹಳ ತಿಳಿದವನ ಹಾಗೆ