ಈ ಪುಟವನ್ನು ಪ್ರಕಟಿಸಲಾಗಿದೆ

"ಗೆಟ್ ಔಟ್, ರಾಸ್ಕಲ್!"

ಅದು ಕೇಳಿಸದವನಂತೆ ನಟಿಸುತ್ತಾ, "ಏನೆಂದಿರಿ ಸಾರ್?"ಎಂದೆ.

ನನ್ನ ತಂದೆ ಮುಂದೆ ಹೆಜ್ಜೆಯಿಟ್ಟು ನನ್ನನ್ನು ತನ್ನೆಡೆಗೆ ಎಳೆದು ಕೊಂಡ. ನಾವಿಬ್ಬರೂ ಬೀದಿಗಿಳಿದೆವು. ಮನೆಯ ಹಾದಿ ಹಿಡಿದೆವು.ಅಜ್ಜಿ ನಮ್ಮ ಬರವನ್ನೇ ಇದಿರುನೋಡುತ್ತಿದ್ದ ಹಾಗಿತ್ತು. ತಂದೆ ಹಾದಿಯುದ್ದಕ್ಕೂ ಮಾತನಾಡಿಯೇ ಇರಲಿಲ್ಲ. ````ಆದರೆ ಅಜ್ಜಿ ನನ್ನನ್ನು ಕಂಡೊಡನೆ ಮುಂದಕ್ಕೆ ಓಡಿಬಂದರು. ಆಕೆ ಮಡಿಯಲ್ಲಿರಲಿಲ್ಲ. ಸ್ನಾನಮಾಡಿಯೇ ಇರಲಿಲ್ಲ. ಓಡುತ್ತ ಬಂದು ಆಕೆ ನನ್ನ ಮೈದಡಿವಿದರು.

"ಏನಪ್ಪಾ ಚಂದ್ರು........ಹೊಡೆದ್ರೇನೋ ನಿಂಗೆ?"ಹನ್ನೊಂದು ವರ್ಷಗಳ ಹಿಂದೆ, ನಾನು ಮೊದಲ ಬಾರಿ ಶಾಲೆಗೆ ಹೋಗಿ ಹಿಂತಿರುಗಿದ್ದಾಗ, ಆಗ ಹೊಸ ಪರಿಚಯದವರಾಗಿದ್ದ ಆ ಅಜ್ಜಿ, ಅದೇ ಪ್ರಶ್ನೆಯನ್ನು ನನಗೆ ಕೇಳಿದರು.

ನಾನೀಗ ದೊಡ್ಡವನಾಗಿದ್ದೆ. ಆದರೂ ಅಜ್ಜಿಯ ಮಡಿಲಲ್ಲಿ ಕ್ಷಣಕಾಲ ಮುಖವಿಟ್ಟೆ. ಆಕೆ ನನ್ನ ತಲೆಗೂದಲು ನೇವರಿಸಿದರು, ಬೆನ್ನ ಮೇಲೆ ಕೈಯಾಡಿಸಿದರು. ಹೊಡೆತದ ಗುರುತುಗಳನ್ನು ಅವರ ವಯಸ್ಸಾದ ಬೆರಳುಗಳು ಹುಡುಕಿ ಹಿಡಿದುವು.

"ಪಾಪಿ ಮುಂಡೇಗಂಡರು. ಅವರ ಮನೆ ಹಾಳಾಗ! ಅವರ ಸಂತಾನ ಮಣ್ಣುತಿಂದು ಹೋಗ! ಅವರ ವಂಶ ನಾಶವಾಗ! ನನ್ನ ಮರಿ ಮೈ ಮುಟ್ಟದ ಕೈ ಕತ್ತರಿಸಿ ಹೋಗ!..........."

ನೋವಿನಿಂದಲ್ಲ, ಆ ಅಜ್ಜಿ ನನಗಾಗಿ ತೋರುತ್ತಿದ್ದ ಮಮತೆಯಿಂದ, ನನ್ನ ಹೃದಯ ಬಿರಿಯಿತು. ನಾನು ದ್ವೇಷಿಸಿದ ಪೋಲೀಸ ರೆದುರಲ್ಲಿ ಅತ್ತಿರಲಿಲ್ಲ. ನಾನು ಪ್ರೀತಿಸಿದ ಅಜ್ಜಿಯ ಎದುರು ಕಣ್ಣೀರನ್ನು ಹರಿಯ ಗೊಟ್ಟೆ.- ಹಾಗೆ ಮಾಡಲು ನನಗೆ ನಾಚಿಕೆಯಾಗಲಿಲ್ಲ.

........ಅಜ್ಜಿ ಹೇಳಿದ ಮಾತುಗಳಿಂದ ಹಿಂದಿನ ರಾತ್ರೆ ನಡೆದು ದನ್ನು ನಾನು ಊಹಿಸಿಕೊಂಡೆ. ಚೆಲ್ಲಾಪಿಲ್ಲಿಯಾಗಿದ್ದ ನಮ್ಮ ಗುಡಿ