ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩

ಯಶೋಧರ ಚರಿತೆ


ಮುನಿದಯ್ನೂರುಂ ಕುನ್ನಿಗ

ಳನಿತುಮನೊರ್ಮೊದಲೆ ತೋರೆ ಕೊಳ್ಕೊಳಿಸೆ ಮಹಾ

ಮುನಿ ತಳರದೆ ಮೇರುವೊಲಿರೆ

ವನಮೃಗದವೊಲುರ್ಕನರೆದು ಸುಳೆದುವು ನಾಯ್ಗಳ್ 43


ಆ ಯತಿಗಾಯತಿಗಿಡೆ ಕೌ-

ಳೇಯಕತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ-

ಕ್ಷೇಯಕದೆ ಪೊಯ್ಯಲೆಯ್ದೆ ವಿ

ನೇಯಂ ಕಲ್ಯಾಣಮಿತ್ರನೆಂಬ ಪರದಂ 44


ಕೆಮ್ಮನೆ ಬಾಳಂ ಕಿಳ್ತಿಯ್

ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆಂ-

ದಾನ್ ಮಾಣಿಸದೊಡೆ ಕೋಟಲೆ-

ಯಂ ಮಾಡವೆ ದೇವ ನಿನಗೆ ದುರಿತಶತಂಗಳ್ 45

_____

ಬಂತು. 43. ಕ್ರೋಧದಿಂದ ರಾಜನು ತನ್ನ ಐನೂರು ನಾಯಿಗಳನ್ನೂ ಒಮ್ಮೆಲೆ ಛೂ ಬಿಟ್ಟನು. ಅವರು ಮಾತ್ರ ಕದಲಲೇ ಇಲ್ಲ. ಮೇರುವಿನಂತೆ ನಿಶ್ಚಲರಾಗಿ ಅವರಿದ್ದಾಗ ನಾಯಿಗಳು ತಮ್ಮ ಕೆಚ್ಚನ್ನೆಲ್ಲ ಕಳೆದುಕೊಂಡು ಕಾಡಿನ ಜಿಂಕೆಗಳಂತಾಗಿ ಅಲ್ಲೆ ಸುತ್ತ ಸುಳಿದವು. 44. ಮುನಿಯ ಮುಂದೆ ನಾಯಿಗಳೂ ತಮ್ಮ ಬಿರುಸನ್ನು ಕಳೆದುಕೊಂಡಾಗ ಅರಸನು ಮತ್ತಷ್ಟು ಕೆರಳಿದನು. ರೋಷದಿಂದ ಖಡ್ಗವನ್ನು ಜಳಪಿಸಿ ಕಡಿದೊಗೆಯಲು ಮುಂದಾದನು. ಅಷ್ಟರಲ್ಲಿ ಅವನೊಂದಿಗಿದ್ದ ಕಲ್ಯಾಣ ಮಿತ್ರನೆಂಬ ನಯವಂತನಾದ ವ್ಯಾಪಾರಿಯು, 45. “ಸುಮ್ಮನೆ ಕತ್ತಿಯನ್ನು ಹೀರಿದಿರಲಿಲ್ಲ! ಪಾಪ ಮಾಡುವವರನ್ನು ಆ ಕೃತ್ಯದಿಂದ ತೊಲಗಿಸದಿದ್ದರೆ, ಅಂತಹ ಮಿತ್ರನು ಮಿತ್ರನೇ ಅಲ್ಲ! ಆದುದರಿಂದ ನಾನೀಗ ನಿಮ್ಮನ್ನು ತಡೆಯಲೇ ಬೇಕಾಗಿದೆ. ಇಲ್ಲವಾದರೆ ಮುಂದೆ ನೂರಾರು ಕೇಡುಗಳು ನಿಮ್ಮನ್ನು ಬಾಧಿಸದೆ