ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೯

ಯಶೋಧರ ಚರಿತೆ


ಕೋಳಿಯ ಕೂಗೆತ್ತಲ್ ನೀನ್

ಸೂಳರೆದವನೆಸೆವುದೆತ್ತಲಾ ಖಗಯುಗಳಂ

ಬೀಳಲೊಡನಾದ ಮಾನಸ-

ವಾಳೆತ್ತಲ್ ನೋಡ ಧರ್ಮಮೊದವಿದ ಪದನಂ 61


ಎನೆ ಮುನಿವಚನದೊಳಂ ನಂ-

ದನರೂಳಮಾಗಳೆ ಯಶೋಮತಿಕ್ಷಿತಿಪಂ ತೆ-

ಳ್ಳನೆ ತಿಳಿದು ಭಾಪು ಸಂಕ-

ಲ್ಪನ ವಧೆಗಿನಿತಾಯ್ತು ದಿಟದಿನೇನೇನಾಗರ್ 62


ಎನಿತೊಳವು ಜೀವರಾಶಿಗ-

ಳನಿತುಮನೋರಂತೆ ಕೊಂದು ತಿಂದುಂ ತಣಿವಿ-

ಲ್ಲೆನೆ ಬರ್ದೆನಿಂದುವರಮಿ-

ನ್ನೆನಗಿನ್ನೆಂತಪ್ಪ ನರಕಮಿದಿರ್ವಂದಪುದೋ 63

_____

61. ಕೋಳಿಗಳ ಕೂಗೆಲ್ಲಿ? ಆ ಸ್ವರವನ್ನಾಲಿಸಿ ಮಾಡಿದ ಬಾಣ ಪ್ರಯೋಗವೆಲ್ಲಿ? ಆ ಕೋಳಿಗಳು ಸತ್ತಮೇಲೆ ಅವುಗಳಿಗೆ ದೊರೆತುದು ಮಾನವಜನ್ಮ. ಇದರಿಂದ ಧರ್ಮವು ಎಂತಹ ಸ್ಥಿತಿಯನ್ನೊದಗಿಸುವುದೆಂಬುದು ಪ್ರತ್ಯಕ್ಷವಾಗುವುದಿಲ್ಲವೆ?” 62. ಮುನಿಗಳ ಈ ಮಾತನ್ನು ಕೇಳಿ, ಮಕ್ಕಳಿಂದಲೂ ಈ ವಿಷಯವನ್ನು ವಿಚಾರಿಸಿ ಸರಿಯಾಗಿ ತಿಳಿದುಕೊಂಡ ಯಶೋಮತಿ, “ಸಂಕಲ್ಪ ವಧೆಯಿಂದಲೇ ಇಷ್ಟು ಕಷ್ಟಗಳನ್ನು ಅನುಭವಿಸುವಂತಾಯಿತು. ಇನ್ನು ಕೈಯಾರೆ ಕೊಲೆ ಮಾಡಿದರೆ ಇನ್ನೇನಾಗಲಿಕ್ಕಿಲ್ಲ?” ಎಂದುಕೊಂಡನು. 63. ನಾನು ಇದುವರೆಗೆ ಎಷ್ಟೆಷ್ಟು ಪ್ರಾಣಿಗಳಿವೆಯೋ ಅಷ್ಟಷ್ಟನ್ನು ಒಂದೇ ಸಮನೆ ಕೊಲ್ಲುತ್ತಾ ಬಂದು ಅವುಗಳನ್ನು ತಿಂದಿದ್ದೇನೆ. ಆದರೂ ತೃಪ್ತಿಯುಂಟಾಗದೆ ಇದುವರೆಗೂ ಬಾಳಿದೆ. ನನಗೆ ಇನ್ನೆಂತಹ