ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೯

ಟಿಪ್ಪಣಿಗಳು


ಮೆಚ್ಚಿನ ನಾಯಿ ನೀರು ಕುಡಿಯಲು ಹೋಯಿತೆಂದೂ ಆಗ ಅಶ್ವಮಹಿಷ ನ್ಯಾಯದಂತೆ ಕೋಣವು ಅದನ್ನು ಕೊಂದಿತೆಂದೂ ಹೇಳಿದರೆ ದೋಷವೇನು?

55. ಕೇಸರವೆಂದರೆ ಪುಷ್ಪರಾಗ, ಹೂವಿನ ಮಧ್ಯದ ತಂತು, ಹೊಂಬಣ್ಣ ಎಂಬರ್ಥವಾಗುತ್ತದೆ. ಇಲ್ಲಿ ಕೋಳಿ ಹೊಂಬಣ್ಣದಿಂದ ಶೋಭಿಸಿತು ಎನ್ನುವುದು ವಿಹಿತವೆ? ಸಣ್ಣ ಗರಿಗಳು ಹೂವಿನ ತಂತುಗಳಂತಿದ್ದುವು ಎಂದರೂ ತಪ್ಪಲ್ಲ. ಕೂರ್ಪು ಎಂದರೆ ಪರಾಕ್ರಮ, ತೀಕ್ಷ್ಣತೆ ಎಂಬರ್ಥಗಳಿವೆ. ತ್ಯಾಗಿ (ದಾನವನ್ನು) ಕೊಟ್ಟು ಶೋಭಿಸುತ್ತಾನೆ; ಹುಂಜಕ್ಕೆ ತೊಟ್ಟು (ತಲೆಯ ಜುಟ್ಟು) ಶೋಭಿಸುತ್ತದೆ. ರಾಧೆ ಒಂದು ಪಕ್ಕಕ್ಕೆ ಬಾಗಿದ ಮುಡಿ ಕಟ್ಟಿದಂತೆ ಕೋಳಿಯ ಜುಟ್ಟು ಒಂದು ಪಕ್ಕಕ್ಕೆ ಬಾಗಿದೆ. ಚಂದ್ರನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷಗಳಲ್ಲಿ ರಂಜಿಸಿದಂತೆ ಕೋಳಿ ಎರಡು ಪಕ್ಷ ಎಂದರೆ ರೆಕ್ಕೆಗಳಿಂದ ರಂಜಿಸುತ್ತದೆ. ಸುವಸ್ತುಗಳು ಹೇಂಟೆ (ಪೇಂಟೆ - ಪೇಟೆ)ಯಲ್ಲಿ ಸುವಸ್ತುಗಳು ಸೇರಿಸುತ್ತದೆ. ಹಾಗೆಯೇ ಹುಂಜ ಹೇಂಟೆಯಲ್ಲಿ ಸೇರಿದೆ.

ಈ ರೀತಿ ಶ್ಲೇಷೆಯಿಂದ ಹುಂಜವನ್ನು ವರ್ಣಿಸಿದ್ದಾನೆ ಕವಿ.

56. ಹುತ್ತದೊಳಗೆ ಯಾವುದಾದರೂ ಇರುವುದೆಂದು ಹೇಳಿಕೆ. ಹಾಗೆಯೇ ಸನ್ಯಾಸಿಗಳಲ್ಲಿ ಏನಾದರೂ ಮಹತ್ವವಿರುತ್ತದೆ ಎಂದು ಭಾವ.

57. ಅಸನ್ನಭವ್ಯ ಎಂದರೆ ಭವ್ಯವಾಗುವ ಸ್ಥಿತಿಗೆ ಸಮೀಪಿಸಿದವನು. ಭವ್ಯ ಎಂಬುದಕ್ಕೆ ಟಿಪ್ಪಣಿಯ 28ನೆಯ ಸಂಖ್ಯೆ ಮುಂದೆ ನೋಡಿಕೊಳ್ಳಬಹುದು. ಅವಧಿಜ್ಞಾನ ಎಂದರೆ ದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವ ಇವುಗಳಿಂದ ಮರ್ಯಾದಿತವಾದ ಪದಾರ್ಥಗಳನ್ನು ಮತ್ತು ಕರ್ಮಬದ್ಧ ಜೀವಿಗಳ ಅನೇಕ ಭವಗಳನ್ನು ತಿಳಿದುಕೊಳ್ಳುವ ಜ್ಞಾನ.

58. ‘ರತ್ನತ್ರಯಗಳಲ್ಲಿ ಸ್ಥಿರವಾಗಿ ಪ್ರಾಣತ್ಯಾಗ ಮಡುವ ಕ್ರಮ' ಎಂದರೆ ಧ್ಯಾನ ಮಾಡುತ್ತಿರುವಂತೆ ಪ್ರಾಣ ಕಳೆದುಕೊಳ್ಳುವಿಕೆ.

59. ಹೂದೋಟದಲ್ಲಿ ಬಳ್ಳಿಯನ್ನು ನೆಟ್ಟು ನೀರೆರೆದು ಚಪ್ಪರಕ್ಕೆ ಹಬ್ಬಿಸುವಂತೆ ಇಲ್ಲಿ ಯಶೋಧರನು ದಾನ ಮಾಡುತ್ತ ದಯಾಪರನಾಗಿ ಜಿನಮತದಲ್ಲಿ ಸಂತೋಷದಿಂದಿದ್ದು ಕೀರ್ತಿ ಕುಸುಮವನ್ನು ಅರಳಿಸಿದನು ಎಂದು ತಾತ್ಪರ್ಯ.

60. ಯಶಸ್ಸು ಬೆಳ್ಳಗಿದೆಯೆಂದು ಕವಿಸಮಯ. ಈ ಯಶಸ್ಸಿಗೆ ಉಪಮಾನವಾಗಿ ಅನೇಕ ಶುಭವಸ್ತುಗಳ ಹೆಸರನ್ನು ಹೇಳಲಾಗಿದೆ. ತಾರಾ-ಬೆಳ್ಳಿ ; ಅಥವಾ ನಕ್ಷತ್ರ ಧರಾಧರ-ಪರ್ವತ)-ಬೆಳ್ಳಿಯ ಬೆಟ್ಟ. ತಾರಾ ಎಂದು ಮಾತ್ರ ಇಟ್ಟುಕೊಂಡರೆ ಇಲ್ಲಿಯೂ ನಕ್ಷತ್ರ ಅಥವಾ ಬೆಳ್ಳಿ ಎನ್ನಬಹುದು. ತಾರಾಧರ