ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ರೋಹಿಣಿದೇವಿ : ದೇವರ ಕರುಣೆಯಿಂದ ನನಗೇನೂ ಕಡಮೆಯಾಗಿಲ್ಲ. ಮಥುರೆಯಲ್ಲಿ ಬೇಕಾದಷ್ಟು ದೊಡ್ಡ ಮನೆಯಿದೆ. ಆದರೆ ಆಯುಷ್ಯ ಸಾರ್ಥಕವಾಗಬೇಕಾದರೆ, ಏನಾದರೂ ಸೇವೆಯನ್ನು ಸಲ್ಲಿಸಿದೆವೆಂದು ನಮಗನಿಸಬೇಕಲ್ಲ ? ಮನೆಯಲ್ಲಿ ಕುಳಿತು, ಕುಳಿತು, ವಿಚಾರ ಮಾಡಿ, ಮಾಡಿ, ತಲೆ ಭ್ರಮಿಸಹತ್ತಿತು. ಜೀವನದಲ್ಲಿ ಜಿಗುಪ್ಪೆಯುಂಟಾಯಿತು. ದೇವರು ನನಗೆ ಸಂತತಿಯನ್ನು ಕೊಡಲಿಲ್ಲ. ಸಮಾಜವೇ ನಮ್ಮ ಸಂತತಿ ಎಂದಿದ್ದೇವೆ. ಜನತಾ ಜನಾರ್ದನನ ಸೇವೆಯೇ ನಮ್ಮ ಗುರಿಯೆಂದಿದ್ದೇವೆ. ಅದಕ್ಕೇ ಈಗ ದಿಲ್ಲಿಯಲ್ಲಿ ನೆಲಿಸಲು ಬಂದಿರುವದು. ರುಕ್ಕಿಣಿದೇವಿ : ನಾವೂ ಸಂತತಿಹೀನರು. ದಿಲ್ಲಿಯ ಸಾರ್ವಜನಿಕ ಜೀವನ ದಲ್ಲಿ ಇವರು ಮನಸ್ಸು ಹಾಕಿದರು. ಆಸ್ಟ್ರೇಷ್ಟರ ವರ್ಗದೊಡನೆ ಹೊಂದಿಕೊಂಡು ನಾನಿದ್ದೆ, ಇವರಿಗೇಕೋ ಬೇಸರಾಯಿತು. ಈಗ ಧರ್ಮವನ್ನೇ ನೆನೆದು ಆತ್ಮಶೋಧನೆಗಾಗಿ ಮಾಹುವಿಗೆ ನಡೆದಿದ್ದೇವೆ. ಕಿಶನ್ ಕಿಶೋರ : ಹೌದು. ದೇವರು ನಮಗೂ ಸಂಪತ್ತು ಕೊಟ್ಟೆ. ಆದರೆ ಸಂತತಿಯನ್ನಲ್ಲ, ದಿಲ್ಲಿಯ ಜೀವನದಲ್ಲಿಯ ದ್ವೇಷ-ದೂಷಣೆಗಳಿಗೆ ಬೇಸತ್ತು ಈಗ ಅಲ್ಲಿಂದ ಹೊರಟಿದ್ದೇವೆ. ಜನದಿಂದ ದೂರವಾಗಿದು ವನಶೀಯ ಮಧ್ಯದಲ್ಲಿ ಮನಃಶಾಂತಿಯನ್ನು ಪಡೆಯುವದೆಂದು ನರ್ಮದೆಯ ತೀರದಲ್ಲಿ ಮಾಹುವಿನ ಹತ್ತಿರ ಒಂದು ಬಂಗಲೆ ಕೊಂಡಿದ್ದೇವೆ. ಆಯುಷ್ಯದ ಉಳಿದ ಭಾಗವನ್ನು ಅಲ್ಲಿಯೇ ಕಳೆಯಬೇಕೆಂದು ನಮ್ಮಿಬ್ಬರ ಸಂಕಲ್ಪವಾಗಿದೆ. ಕಾಂತಿಚಂದ್ರ : ಬೇಸತ್ತರೆ ಹೇಗೆ ? ಬಂದುದನ್ನೆಲ್ಲ ಎದುರಿಸಿ ಜಯಿಸ ಬೇಕಲ್ಲವೆ ?

  • [ ಇಷ್ಟರಲ್ಲಿ ಮೃಣಾಲಿನಿಯು ಪ್ರವೇಶಿಸುತ್ತಾಳೆ.] ಮೃಣಾಲಿನಿ : ಓಹೋ ! ಇಲ್ಲಿ ಹರಟೆ ಕೊಚ್ಚುತ್ತ ಕೂತಿದ್ದೀರಾ ! ದಿನಾಲು ತಾಸುಗಟ್ಟಲೆ ತಡಮಾಡಿ ಬರುವ ಗಾಡಿ ಇಂದು ವೇಳೆಗೆ ಸರಿಯಾಗಿ ಬರ ಬೇಕೆಂದರೆ! ಬರುವಾಗ ಮಜದೂರ ಸಂಘದ ಕಾರ್ಯದರ್ಶಿ ಭಟ್ರಯಾದ. ಅವನೊಡನೆ ಐದು ನಿಮಿಷ ಮಾತನಾಡುತ್ತ ನಿಂತೆ. ಅದೇ ತಪ್ಪಾಯಿತು ! ಮುಂದೆ ನಿಲ್ಮನೆಯಲ್ಲೆಲ್ಲ ಹುಡುಕಿದೆ. ನೀವು ಕಾಣಲಿಲ್ಲ. ನಡೆಯಿರಿ. ಹೊರಗೆ ಕಾರು ನಿಂತಿದೆ. [ ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತು ಬೆವರೊರಿಸಿಕೊಳ್ಳುತ್ತಾಳೆ. 1