ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ರೋಹಿಣಿದೇವಿ: ಹಾಗಾದರೆ ನಾನೇನು ಮಾಡಬೇಕೆಂದು ನಿನ್ನ ಅಭಿಪ್ರಾಯ ಏದೆ, ಮೃಣಾಲಿನಿ ! ಮೃಣಾಲಿನಿ: ಏನು ಮಾಡಬೇಕು ? ಭಾರತದಲ್ಲಿ ಏನು ಮಾಡಬೇಕೆಂಬ ಪ್ರಶ್ನೆಯನ್ನು ಕೇಳುವ ಪ್ರಸಂಗವೇ ಬರುವದಿಲ್ಲ ! ಜನತೆಯ ಹಕ್ಕಿಗಾಗಿ ಹೋರಾಡಬೇಕು. ಔದ್ಯೋಗೀಕರಣವನ್ನು ಆಮೂಲಾಗ್ರವಾಗಿ ಪ್ರಾರಂಭ ಸಬೇಕು. ವರ್ಗಭೇದಗಳನ್ನು ತೊಡೆದು ಹಾಕಿಬಿಡಬೇಕು ! ರೋಹಿಣಿದೇವಿ : ಈಗ ಕಾಂಗ್ರೆಸ್ಫೂ ಅದೇ ಹಾದಿಯಲ್ಲಿ ಪ್ರಯತ್ನಿ ಸು. ತಿದೆಯಲ್ಲ ! ಮೃಣಾಲಿನಿ ; ( ತಿರಸ್ಕಾರದಿಂದ, ೨೦! ಆ ಕಾಂಗ್ರೆಸ್ಸಿನ ಹೆಸರು ತೆಗೆಯ ಬೇಡಿರಿ ! ಅದು ಬಂಡುವಲಶಾಹಿ ಸಂಸ್ಥೆ, ಗಿರಣೀಶ್ವರರ ಸಂಘ ! ಕಾಂತಿಚಂದ್ರ : ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಾಂಗ್ರೆಸ್ಸನ್ನು .... { ದಯಾರಾಮನು ಬರುತ್ತಾನೆ. ] ದಯಾರಾಮ : ಸೇಠ ಬನಸಿಲಾಲರು ಭೆಟ್ಟಗೆ ಬಂದಿದ್ದಾರೆ, ಸರಕಾರ್ ! ಕಾಂತಿಚಂದ್ರ : ಹೀಗೋ ! ಇದೊಂದು ವಿಶೇಷ ! ದಯಾರಾಮ್ ! ಅವರನ್ನು ಕರೆದುಕೊಂಡು ಬಾ ! ದಯಾರಾಮ : ಜೀ ! ( ಹೋಗುತ್ತಾನೆ. ) ಕಾಂತಿಚಂದ್ರ : (ನಗೆಮೊಗದಿಂದ ರೋಹಿಣಿದೇವಿಯನ್ನು ನೋಡುತ್ತ ) ಈಗ ಬನಸೀಲಾಲರಿಗೆ ಬಿಸಿ ಹತ್ತಿದ ಹಾಗೆ ಕಾಣುತ್ತದೆ ! ರೋಹಿಣಿದೇವಿ : ಹತ್ತದೆ ಏನು ? ಇಲ್ಲಿ ಬಂದರೇನು ಶೈತ್ಯೋಪಚಾರ ಸಿಗುವದಿಲ್ಲ. ಇನ್ನಿಷ್ಟು ಬಿಸಿ ಹತ್ತುತ್ತದೆ. ಮೃಣಾಲಿನಿ : ಉಂ! ಮತ್ತೆ ಸುರುವಾಯಿತು ನಿಮ್ಮ ಮಾತಿಗೆ ! ಇಲ್ಲಿ ಕೊಡಿರಿ ನನ್ನ ಪುಸ್ತಕವನ್ನು ! ಮತ್ತೆ ನನ್ನ ಓದನ್ನು ಮುಂದುವರಿಸುತ್ತೇನೆ! [ ಪುಸ್ತಕವನ್ನು ತೆಗೆದುಕೊಂಡು ಓದತೊಡಗುತ್ತಾಳೆ. ಸೇಠ ಬನಸಿ - ಲಾಲನು ಬರುತ್ತಾನೆ. ] ಬನಸಿಲಾಲ: ನಮಸ್ತೇ, ಕಾಂತಿಚಂದ್ರಜಿ ! ಕಾಂತಿಚಂದ್ರ : (ಏಳು) ನಮಸ್ತೆ ! ಹೀಗೆ ಇಲ್ಲಿ ದಯಮಾಡಿಸಿರಿ !