ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ೦ತು ೧ ೨೩ ನಗಬೇಕೆಂದಿದ್ದೇನೆ. ರಾಜಕಾರಣದಲ್ಲಿ ಧುಮುಕುವ ಮೊದಲು ಅನಾಥಾಶ್ರಮಕ್ಕಿಷ್ಟು ಸೇವೆಯನ್ನು ಸಲ್ಲಿಸಬೇಕೆಂದು ಮನಸ್ಸಿದೆ. ನನ್ನ ಬಿನ್ನಹ ವನ್ನು ತಾವು ಮನ್ನಿಸಬೇಕು. ರೋಹಿಣಿದೇವಿ : ಕಾಂತಿಚಂದ್ರರೇ ಅಧ್ಯಕ್ಷರಾಗಬೇಕೆಂದು ಟ್ರಸ್ಟಿನ ಸದಸ್ಯ. ರೆಲ್ಲರ ಆಗ್ರಹವಿದೆ. ತಾವು ಈ ಮಾತನ್ನು ಸದಸ್ಯರಿಗೆ ಹೇಳಬೇಕು ! ಕಂತಿಚಂದ್ರ : ಹೌದು, ಬನಸಿಲಾಲಜಿ ! ಸದಸ್ಯರೆಲ್ಲ ಹಟ ಹಿಡಿದರೆ ನಾನೇನು ಮಾಡಲಿ ! ಬನಸಿಲಾಲ : ( ಬೇಕರಿಸಿ) ಕಾಂತಿಚಂದ್ರಜಿ! ಸಾರ್ವಜನಿಕ ಜೀವನದಲ್ಲಿ ತಾವು ಹೊಸಬರಿರಬಹುದು. ಆದರೆ ಅದರಲ್ಲಿ ದಿಲ್ಲಿಯಷ್ಟು ಪುರಾತನ ಅನುಭವ ನನಗಿದೆ. ಅಧ್ಯಕ್ಷರಾಗುವದೂ ಬಿಡುವದೂ ತನ್ನ ಕೈಯಲ್ಲಿಯೇ ಇದೆ. ಇದು ನಮ್ಮಿಬ್ಬರಿಗೂ ಚೆನ್ನಾಗಿ ಗೊತ್ತು. ನನ್ನ ನಿಮ್ಮ ನಡುವೆ ಇಲ್ಲದ ಈರ್ಷೆ ಬೀಳಬಾರದು. ಇನ್ನೊಮ್ಮೆ ವಿಚಾರ ಮಾಡಿರಿ. ರೋಹಿಣಿದೇವಿ : ಅಂದರೇನು ? ಕಾಂತಿಚಂದ್ರರನ್ನು ತಾವು ಅಂಜಿಸ ಬೇಕೆಂದಿದ್ದೀರಾ ? ಈಗ ವಿಚಾರ ಮಾಡಿದ ಹಾಗೆಯೇ ಇದೆ. ಸದಸ್ಯರು ಮಾಡಿದ ಆಯ್ಕೆಯನ್ನು ಬಿಟ್ಟು ಕೊಟ್ಟರೆ ಅವರಿಗೆ ದ್ರೋಹ ಬಗೆದ ಹಾಗಾದೀತು ! ಕಾಂತಿಚಂದ್ರ : ಹೌದು. ಅವರ ಇಚ್ಛೆಗೆ ಎರವಾಗುವದು ಸಾಧ್ಯವಿಲ್ಲ. ಬನಸಿಲಾಲ : ( ಕ್ರೂರ ದೃಷ್ಟಿಯಿಂದ ನೋಡುತ್ತ ) ಇದು ನಿಶ್ಚಯವೆ ? ಕಾಂತಿಚಂದ್ರ : ( ರೋಹಿಣಿದೇವಿಯನ್ನು ನೋಡುತ್ತ ) ಹೌದು, ನಿಶ್ಚಯ ಬನಸಿಲಾಲ : ( ಏಳುತ್ತ ) ಆಗಬಹುದು. ನಿಮ್ಮಿಷ್ಟ. ........ ಹೂಂ ....... ಆಗಲಿ ..... .... ಬರುತ್ತೇನೆ, ರೋಹಿಣಿದೇವಿಯವರೆ! ಈ ವಿಷಯದಲ್ಲಿ ನನಗೆ ತಮ್ಮಿಂದ ತುಂಬ ಸಹಾಯವಾಯಿತು. ! ರೋಹಿಣಿದೇವಿ : ( ಬಿಗುವಿನಿಂದ ಇರಬಹುದು. ಆಗಿದ್ದರೆ ಬಹಳ ಸಂತೋಷ. ಮೃಣಾಲಿನಿ : ( ಪುಸ್ತಕ ಮುಚ್ಚಿ ) ಏನು, ಸೇಠರೆ ! ಮುಗಿಯಿತೇ ನಿಮ್ಮ ಮಾತು ?