ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಮೃಣಾಲಿನಿ : ಈ ಪಲ್ಲೆ ರುಚಿಯಾಗಿದೆ, ಮುದುಕಪ್ಪ ! ಇಂಥ ಸಲ್ಲೆ ಯನ್ನು ದಿಲ್ಲಿಯಲ್ಲಿಯೂ ತಿಂದಿಲ್ಲ. ರೈತ : ದಿಲ್ಲಿಯಲ್ಲಿ ನೀವು ತಿನ್ನುವ ಸಾಮಾನು ಬೇರೆ, ತಾಯಿ ! ನಮ್ಮಂಥ * ಬಡವರಿಂದ ಅವು ಹೇಗೆ ದೊರೆತಾವು ? ಆದರೆ ನಮ್ಮದು ನಮಗೆ ರುಚಿ ಯಾಗಿದೆ. ಇಲ್ಲದಿದ್ದರೆ ನಾವು ತಿಂದು ಬದುಕೇವೇ ! ಮೃಣಾಲಿನಿ : ಆದರೆ ಈ ನಿನ್ನ ಚಟ ಬಲು ಖಾರ, ಮುದುಕಪ್ಪ ! ಇದರ ಜೊತೆಗೆ ನೀರು ಬೇಕು. ಮುಮಕ: ಅವಸರದಲ್ಲಿ ಹಾಗೇ ಬಂದೆ. ಈಗ ತರುತ್ತೇನೆ, ತಾಯಿ, ( ಹೋಗುತ್ತಾನೆ. ) ಕೋಸಲೇಂದ್ರ: ಎಂಥೆಂಥ ಭಜಿ ತಿಂದ ನಾಲಗೆ ನಿನ್ನದು. ಇದು ಖಾರ - ಹತಿ ತೆ ? ( ನಗುತ್ತಾನೆ. ) ಮೃಣಾಲಿನಿ : ( ನಕ್ಕು ) ಹೌದು. ಇದನ್ನು ತಿಂದು ಮಾತನಾಡಿದರೆ ರುಕ್ಕಿಣಿದೇವಿಯರು ನನ್ನೆದುರು ನಿಲ್ಲಲಿಕ್ಕಿಲ್ಲ. ಆದರೆ, ಕೋಸಲೇಂದ್ರ ಇಷ್ಟೊಂದು ಖಾರ ತಿಂದು, ಇಷ್ಟು ಕಷ್ಟವನ್ನು ಅನುಭವಿಸಿ ಇಷ್ಟೊಂದು ಸವಿ ಮಾತಾಡುತ್ತಾನಲ್ಲ, ಈ ರೈತ ! ಇವನು ಒಳ್ಳೆಯ ಮಾರ್ಕ್ಸವಾದಿ ಯಾಗಬಲ್ಲ. ಆ ತತ್ವದರ್ಶನವೊಂದನ್ನು ಇವನಿಗೆ ಮುಟ್ಟಿಸಿದರೆ ಸಾಕು. ಕೋಸಲೇಂದ್ರ, ತಿರುಗಿ ಹೋಗುವಾಗ ಅವನಿಗೊಂದು ಕಾಣಿಕೆಯನ್ನು ನಾವು ಕೊಡಬೇಕು. ಆಗ ಮಾರ್ಕ್ಸವಾದದ ಒಂದು ಪಾಠವನ್ನೂ ಕಲಿಸಿ ಹೋಗುತ್ತೇನೆ. ಕೂಸಲೇಂದ್ರ: ( ನಕ್ಕು ) ಮೃಣಾಲಿನಿ, ಕಲಿಸುವ ಹವ್ಯಾಸ ಇನ್ನೂ ನಿನ್ನನ್ನು ಬಿಟ್ಟಿಲ್ಲವೆಂದು ಕಾಣುತ್ತದೆ. ಆ ಕ್ರಾಂತಿ ನಿನ್ನ ರೇಲ್ವೆ-ಗಿರಣಿಗಳ ಕೆಲಸಗಾರರಿಂದ ಬರಬೇಕಾದ್ದು , ಈ ರೈತ ಅದನ್ನು ದೇವರ ನ್ಯಾಯ ಎಂದು ಮಾತ್ರ ಸ್ವೀಕರಿಸಬಲ್ಲ. ನಾನು ಅವನಿಂದ ಕಲಿತಿದ್ದ ಪಾಠ ಇದು - ಇನ್ನೊಬ್ಬರ ಸಲುವಾಗಿದ್ದ ಆ ಕರುಣೆಯ ಕಣ್ಣು , ಆ ತ್ಯಾಗದ ಮನಸ್ಸು! ಮೃಣಾಲಿನಿ : ( ನಗುತ್ತ ) 'ಹೂಂ! ಇನ್ನು ದಾರಿಯಲ್ಲಿ ಮತ್ತೆ ಕಲಹ ಬೇಡ, ನೀರನ್ನಿ ಷ್ಟು ಕುಡಿದು ಮತ್ತೆ ಹೊರಡೋಣ. ಇದ್ದ ಬಿದ್ದ ಶಕ್ತಿಯನ್ನೆಲ್ಲ ಈ ನಿನ್ನ ಪವಿತ್ರ ಸ್ಥಳವನ್ನು ಮುಟ್ಟಲು ವೆಚ್ಚ ಮಾಡಬೇಕಾಗಿದೆ. (ತರ, ]