ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ೦ಕ 4 ಇನ್ನೊಬ್ಬರು ಯಾರೋ ಇಲ್ಲಿಗೆ ಬರಬೇಕೆಂದಿದ್ದಾರೆ. ಅದಕ್ಕೆ ಹೀಗೆಲ್ಲ ಆಗುತ್ತಲಿದೆ. ಕೋಸಲೇಂದ್ರ : ಯಾರು ? ಯಾರು ಬರುವವರಿದ್ದಾರೆ ? ಮೃಣಾಲಿನಿ ! ( ತುಸು ನಕ್ಕು ) ಅವರ ಮೇಲೆ ಸಿಟ್ಟಿಗೆದ್ದೇನು ಪ್ರಯೋಜನ ? `ನಿನಗೆ ಮಗನೋ ಮಗಳೋ ಹುಟ್ಟಿ ಬರಬೇಕಾಗಿದೆ, ಕೋಸಲೇಂದ್ರ, ಅದಕ್ಕಾಗಿ ನಾನು ಇಷ್ಟೆಲ್ಲ ತೊಂದರೆಪಡಬೇಕು. ಕೋಸಲೇಂದ್ರ : ಓ.......ಹೊ! ಹೀಗೇನು ! ಮೊದಲೇ ಏಕೆ ಹೇಳಲಿಲ್ಲ, ಮೃಣಾಲಿನಿ. ನಾನು ಎಷ್ಟು ಗಾಬರಿಯಾಗಿದ್ದೆ. ( ತನ್ನ ಅಜ್ಞಾನಕ್ಕೆ ತಾನೇ ನಗುತ್ತಾನೆ. ) ಮೃಣಾಲಿನಿ : ( ನಕ್ಕು ) ನಾನು ಹೇಳುವದಕ್ಕಿಂತ ಮೊದಲೇ ನೀನು ಡಾಕ್ಟ `ರೆಡೆಗೆ ಓಡಹತ್ತಿದರೆ ನಾನೇನು ಮಾಡಬೇಕು. ಕೋಸಲೇಂದ್ರ : ಇದು ರುಕ್ಷ್ಮಿಣಿದೇವಿಯರಿಗೆ ಗೊತ್ತಾಗಿದೆಯೇ, ಮೃಣಾಲಿನಿ. ಕೇಳಿದ ಕೂಡಲೆ ಅವರು ಕುಣಿದಾಡುವರು. ಮೃಣಾಲಿನಿ : ಅವರು ಕುಣಿದಾಡುವದರಲ್ಲಿಯೇ ನಾನು ಒದ್ದಾಡುವ ಪ್ರಸಂಗ `ಬಂದಿದೆ, ಕೋಸಲೇಂದ್ರ, ನೀವು ಗಂಡಸರು ಬಲು ಸ್ವಾರ್ಥಿಗಳು, ಹೆಣು ಮುಂದುವರಿದು ಸಮಾಜದಲ್ಲಿ ಕೆಲಸಮಾಡುವದು ನಿಮಗೆ ಸರಿಬರುವದಿಲ್ಲ ಕೋಸಲೇಂದ್ರ : ಅದೇಕೆ, ಮೃಣಾಲಿನಿ. ಮೃಣಾಲಿನಿ : ಏಕೆಂದರೇನು ? ಇನ್ನು ರುಕ್ಕಿಣಿದೇವಿಯವರ ಸಲುವಾಗಿ ಒಂಬತ್ತು ತಿಂಗಳ ನಾನು ಮನೆಯಲ್ಲಿ ಕೂಡಬೇಕು. ಇಲ್ಲದಿದ್ದರೆ ಸಭೆಗಳಿಗೆ ಹೋಗಿ ಮಾತನಾಡುವಾಗ ಈ ಪ್ರದರ್ಶನ ಮಾಡಲಿಕ್ಕಾದೀತೆ ! ರುಕ್ಕಿಣಿ ದೇವಿಯವರದೇನು ಹೋದೀತು ! ಎಲ್ಲರಂತೆ ವರ್ಷಕ್ಕೊಂದು ಹೆರೆಯುವ ಹೆಣ್ಣಾಗಿ ಸಣ್ಣ ಮರಿಗಳ ಗುಂಪನ್ನೇ ಬೆನ್ನು ಹಚ್ಚಿಕೊಂಡು ತಿಪ್ಪೆಯ ಮೇಲೆ ತಿರುಗಾಡುವ ಹೆಣ್ಣು ಗೋಳಿಯಂತೆ ಕೊಕ್ ! ಕೊಕ್ ! ಎಂದು ನಾನೂ ಕೊಕ್ಕರಿಸಿದರೆ ಅವರಿಗೆ ಬಹಳ ಸಂತೋಷ, ಕೋಸಲೇಂದ್ರ: (ನಗು) ಆದರೆ ಒಂದು ಗಂಡು, ಒಂದು ಹೆಣ್ಣು , ಹೀಗೆ ಎರಡು ಮಗು ಬೇಕೆಂದು ನೀನೇ ಹೇಳಿರುವಿಯಲ್ಲ. ಕೆಲವು ವರ್ಷ