ಪೃಥ್ವಿಯಾಕಾಶದೊಳಗೆಲ್ಲ ನಿಮ್ಮ ನಿಮ್ಮ



Pages   (key to Page Status)   


ಪೃಥ್ವಿಯಾಕಾಶದೊಳಗೆಲ್ಲ ನಿಮ್ಮ ಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಸಚರಾಚರದೊಳಗೆಲ್ಲ ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಪಿಂಡಬ್ರಹ್ಮಾಂಡದೊಳಹೊರಗೆಲ್ಲ ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಸಾದದ ಬೆಳಗೆ ತುಂಬಿರ್ಪುದಾಗಿ
ಇಲ್ಲ ಉಂಟು ಎಂಬುದಕ್ಕೆ ತೆರಹಿಲ್ಲವಯ್ಯಾ ಅಖಂಡೇಶ್ವರಾ.