ಪ್ರಥಮದಲ್ಲಿ ಭಕ್ತರಾದೆವೆಂಬರು. ದ್ವಿತೀಯದಲ್ಲಿ ಮಾಹೇಶ್ವರರಾದೆವೆಂಬರು. ತೃತೀಯದಲ್ಲಿ ಪ್ರಸಾದಿಯಾದೆವೆಂಬರು. ನಾಲ್ಕನೆಯಲ್ಲಿ ಪ್ರಾಣಲಿಂಗಿಯಾದೆವೆಂಬರು. ಅಯ್ದನೆಯಲ್ಲಿ ಶರಣರಾದೆವೆಂಬರು. ಆರನೆಯಲ್ಲಿ ಐಕ್ಯರಾದೆವೆಂಬರು. ಆರುಸ್ಥಲವ ಮೀರಿ ನಿರವಯಸ್ಥಲವನೆಯ್ದಿದೆವೆಂಬರು. ಇದು ಖಂಡಿತ ಷಟ್‍ಸ್ಥಲಬ್ರಹ್ಮಜ್ಞಾನ ನಿರ್ಣಯವಲ್ಲ. ಆವಾವಸ್ಥಲವನಂಗಂಗೊಂಡರು ಆ ಸ್ಥಲದಲ್ಲಿ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.