ಪ್ರಾರಬ್ಧವಂತೆ_ ನೊಸಲಬರಹವೆಂತು ಹೋಯಿತ್ತೆನಬಹುದು ? ನೊಸಲಬರಹವಂತೆ_ ಹಸ್ತಮಸ್ತಕ ಸಂಯೋಗವೆಂತಾಯಿತ್ತು ? ಪ್ರಳಯವಂತೆ_ ಪ್ರಾಣಲಿಂಗವೆಂತುಟು ಹೇಳಾ ಗುಹೇಶ್ವರಾ.