ಬಂದುದನೆಲ್ಲವ ನುಂಗಿ ಬಾರದುದನೆಲ್ಲವ ನುಂಗಿ ಆರಿಗಿಲ್ಲದ ಅವಸ್ಥೆ ಎನಗಾಯಿತ್ತು. ಆ ಅವಸ್ಥೆ ಅರತು ನೀನು ನಾನೆಂದರಿದೆ ಗುಹೇಶ್ವರಾ.