ಬಟ್ಟಲೊಳಗಣ ಉದಕವ ತೆಗೆದುಕೊಂಡು ಲಿಂಗದ ಮೇಲೆ ನೀಡಿ
ಜಿಹ್ವೆಯಲ್ಲಿ ಸ್ವೀಕರಿಸಿದಲ್ಲಿಗೆ ಗುರು ಪಾದೋದಕವು. ಮೊದಲು ನಿರೂಪಿಸಿದ ಗುರುಪಾದೋದಕದಿಂದ ಆವ ಪದವಿಯೆಂದಡೆ: ಧರೆಯ ಜನನದ ಅಜ್ಞಾನದ ಭವತ್ವವಳಿದು
ಶಿವಜ್ಞಾನವ ಕರುಣಿಸಿ ಕೊಡುವುದು. ಲಿಂಗಪಾದೋದಕದಿಂದ ಆವ ಪದವಿಯೆಂದಡೆ: ಇಹಲೋಕದ ತನುಭೋಗವಪ್ಪ ಪ್ರಾರಬ್ಧಕರ್ಮವಳಿವುದು
ಶಿವಲೋಕದಲ್ಲಿ `ಇತ್ತಬಾ' ಎಂದೆನಿಸಿಕೊಂಬ ಮನ್ನಣೆಯ ಪದವಿಯಪ್ಪುದು
ಆ ಬಟ್ಟಲಲೆತ್ತಿ ಸಲಿಸಿದ ಜಂಗಮಪಾದೋದಕದಿಂದ ಆವ ಪದವಿ ಎಂದಡೆ: ಇಹಪರಕ್ಕೆ ಎಡೆಯಾಡುವ ಅವಸ್ಥೆಗಳನು
ಪರತತ್ವವಾದ ಜಂಗಮವನು ಐಕ್ಯಮಾಡಿ ಅರಿವಡಿಸಿಕೊಂಡಿಪ್ಪನು. ಇಂತು ಗುರುಪಾದೋದಕ
ಲಿಂಗಪಾದೋದಕ
ಜಂಗಮಪಾದೋದಕ
ತ್ರಿವಿಧ. ಉಳಿದ ಏಳು ಉದಕದೊಳಗೆ ಸ್ಪರ್ಶನೋದಕ ಅವಧಾನೋದಕ ಇವೆರಡು
ಆ ಲಿಂಗದ ಮಸ್ತಕದ ಮೇಲೆ ನೀಡಿ
ಅಂಗುಲಿಗಳ ಜಿಹ್ವೆಯಲ್ಲಿ ಇಟ್ಟುಕೊಂಡಂತಹ ಗುರುಪಾದೋದಕದಲ್ಲಿ ಸಂಬಂಧವು ಅಪ್ಯಾಯನೋದಕ
ಹಸ್ತೋದಕ ಇವೆರಡು
ಲಿಂಗವನೆತ್ತಿ ಸಲಿಸಿದಂತಹ ಲಿಂಗಪಾದೋದಕದಲ್ಲಿ ಸಂಬಂಧವು ಪರಿಣಾಮೋದಕ ನಿರ್ನಾಮೋದಕ ಇವೆರಡು
ಬಟ್ಟಲೆತ್ತಿ ಸಲಿಸಿದಂತಹ ಜಂಗಮ ಪಾದೋದಕದಲ್ಲಿ ಸಂಬಂಧವು. ಸತ್ಯೋದಕ ಬಟ್ಟಲ ಖಂಡಿತ ಮಾಡಿದಲ್ಲಿಗೆ ಸಂಬಂಧವು ಈ ಹತ್ತು ಪಾದೋದಕವು ಮಹತ್ಪಾದದಲ್ಲಿ ಸಂಬಂಧವು ಧೂಳಪಾದೋದಕ
ದಶವಿಧ ಪಾದೋದಕ ಸಂಬಂಧವು ಕ್ರಿಯಾಪಾದೋದಕದಲ್ಲಿ ನೋಡಾ ಕೂಡಲಚೆನ್ನಸಂಗಮದೇವಾ