ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ ಮೈಯೆಲ್ಲಾ ಮುಳ್ಳು ಮುಖವೀರೈದು ನೋಡಾ. ಬಣ್ಣಜ ಮಡಕೆಯನೊಡೆದು ಹೆಣ್ಣನ ಮೈಯ ಮುಳ್ಳನೆಲ್ಲಾ ಮುರಿದು ಮುಖವೀರೈದ ಕೆಡಿಸಿದನು ನಿರ್ಮಲ ನಿರಾವರಣ ಶರಣನು. ಆ ಶರಣಂಗೆ ನಮೋ ನಮೋಯೆಂಬೆನು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.