ಬಣ್ಣವುಂಡ ಚಿನ್ನದಂತೆ ಬೆಣ್ಣೆ ಉಂಡ ಘೃತದಂತೆ ಪ(ಸ್ವ?)ರವುಂಡ ಶಬ್ದದಂತೆ ಪರಿಮಳವುಳ್ಳ ಪುಷ್ಪದಂತೆ ಗುಹೇಶ್ವರಲಿಂಗದಲ್ಲಿ ಹೊರೆಯಿಲ್ಲದಿರ್ಪ ಸಂಗನಬಸವಣ್ಣನ ಭಕ್ತಿಯಾಚಾರದ ಮಹಾತ್ಮೆಯೆಂತು ಪೇಳಾ ಮಡಿವಾಳ ಮಾಚಯ್ಯಾ.