ಬನ್ನಿರೇ ಅಕ್ಕಗಳು ಹೋಗಿರೇ ಆಲದ ಮರಕ್ಕೆ. ಕಚ್ಚುವುದೇ ನಿಮ್ಮ ಚಿಪ್ಪಿನ ಹಲ್ಲುಗಳು. ಬೆಚ್ಚಿಸುವುವೇ ನಿಮ್ಮ ಬಚ್ಚಣಿಯ ರೂಹುಗಳು. ನಮ್ಮ ಕೂಡಲಸಂಗಮದೇವನಲ್ಲದೆ ಪರದೈವಂಗಳು ಮನಕ್ಕೆ ಬಂದವೆ ಬಿಕ್ಕನೆ ಬಿರಿವ ದೈವಂಗಳು.