Pages(key to [[Help:Page Status{{!}}Page Status]])
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು. ಒಬ್ಬ ಭಾವರೂಪ ಒಬ್ಬ ಪ್ರಾಣರೂಪ ; ಒಬ್ಬ ಐಮುಖವಾಗಿ ಕಾಯರೂಪಾದ ; ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ ನೀನೇ ಸಾಕ್ಷಿ.