ಬರಿಯ ಬೋಳುಗಳೆಲ್ಲಾ ಜಂಗಮವೆ ? ಜಡಜೀವಿಗಳೆಲ್ಲಾ ಜಂಗಮವೆ ? ವೇಷಧಾರಿಗಳೆಲ್ಲ ಜಂಗಮವೆ ? ಇನ್ನಾವುದು ಜಂಗಮವೆಂದಡೆ: ನಿಸ್ಸೀಮನೆ ಜಂಗಮ ನಿಜೈಕ್ಯನೆ ಜಂಗಮ ಇಂಥ ಜಂಗಮದ ಸುಳುಹ ಕಾಣದೆ ಕೂಡಲಚೆನ್ನಸಂಗಮದೇವ ತಾನೆ ಜಂಗಮವಾದ