ಬಾಗಿಲ ಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒಡೆತನವುಂಟೆ ಅಯ್ಯಾ ? ಸೂತ್ರದ ಬೊಂಬೆಗೆ ಪ್ರಾಣವುಂಟೆ ಆಡಿಸುವ ಜಾತಿ ಉತ್ತಮಂಗಲ್ಲದೆ ? ಎನ್ನ ಭಾವಕ್ಕೆ ಮನೋಮೂರ್ತಿಯಾಗಿ ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಅಗಮ್ಯವಾಗಿತ್ತು.