ಬಾರದುದೆಲ್ಲವನು ಹಿಂಗಿ ಬಂದುದನೆಲ್ಲವನು ನುಂಗಿ ಆರಿಗೂ ಇಲ್ಲದ ಅವಸ್ಥೆ ಎನಗಾಯಿತ್ತಯ್ಯಾ. ಆ ಅವಸ್ಥೆಯರತು ನಾನು ನೀನೆಂದಿದ್ದೆ ಕಾಣಾ ಗುಹೇಶ್ವರಯ್ಯಾ.