ಬಾರನೇತಕವ್ವಾ ನಮ್ಮನೆಯಾತ ? ತೋರನೇತಕವ್ವಾ ತನ್ನ ದಿವ್ಯರೂಪವ ? ಬೀರನೇತಕವ್ವಾ ಅತಿಸ್ನೇಹವ ? ಇನ್ನೆಂತು ಸೈರಿಸುವೆನವ್ವಾ. ಹೇಗೆ ತಾಳುವೆನವ್ವಾ. ತನು ತಾಪಗೊಳ್ಳುತ್ತಿದೆ ಮನ ತಲ್ಲಣವಾಗುತ್ತಿದೆ. ಅಖಂಡೇಶ್ವರನೆಂಬ ನಲ್ಲನ ತೋರಿಸಿ ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ.