Pages(key to [[Help:Page Status{{!}}Page Status]])
ಬಿಂದುವೆ ಪೀಠವಾಗಿ ನಾದವೇ ಲಿಂಗವಾದಡೆ ಅದು ಭಿನ್ನಲಿಂಗ ನೋಡಾ. ಕಳೆ ಎಂಬ ಪೂಜೆ ನಿರ್ಮಾಲ್ಯವಾಗಿ ನಾದಬಿಂದುಕಳಾತೀತ ನೋಡಾ ಮಹಾಘನವು. ಅಲ್ಲಿ ಇಲ್ಲಿ ಸಿಲುಕಿದ ಅಚಲವಪ್ಪ ನಿರಾಳವ ಪ್ರಣವರೂಪೆಂದು ಹೆಸರಿಡಬಹುದೆ ? ನಮ್ಮ ಗುಹೇಶ್ವರನ ನಿಲುವು `ನಿಶ್ಯಬ್ದಂ ಬ್ರಹ್ಮ ಉಚ್ಯತೇ' ಎಂಬುದನರಿಯಾ ಸಿದ್ಧರಾಮಯ್ಯಾ ?