ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ ಸುಖಿಯಾಗಿ ನಿಂದವರಾರೊ ? ಇದ ಹೇಳಲೂ ಬಾರದು ಕೇಳಲೂ ಬಾರದು. ಗುಹೇಶ್ವರಾ ನಿಮ್ಮ ಶರಣನು ಲಚ್ಚಣವಳಿಯದೆ ರಾಶಿಯನಳೆದನು