ಬಿತ್ತು ಬೆಳೆಯಿತ್ತು ಕೆಯ್ಯ ಕೊಯ್ಯಿತ್ತು ಗೂಡು ಮುರಿಯಿತ್ತು ಕುತ್ತುರಿಯೊಟ್ಟಿತ್ತು ಒಕ್ಕಿತ್ತು ತೂರಿತ್ತು ಅಳೆಯಿತ್ತು ಸಲಗೆ ತುಂಬಿತ್ತು. ಕೂಡಲಸಂಗಮದೇವಯ್ಯಾಮೇಟಿ ಕಿತ್ತಿತ್ತು ಕಣ ಹಾಳಾಯಿತ್ತಯ್ಯಾ.