ಬಿಳಿಯ ಕರಿಕೆ ಕಣಿಗಿಲೆಲೆಯ ತೊರೆಯ ತಡಿಯ ಮಳಲ ತಂದು ಗೌರಿಯ ನೋನುವ ಬನ್ನಿರೆ. ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.