ಬೀಜದಿಂದಾಯಿತ್ತು ಅಂಕುರವೆಂದೆಂಬರು ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು. ಲಿಂಗದಿಂದಾಯಿತ್ತು ಜಂಗಮವೆಂದೆಂಬರು ಆ ಲಿಂಗಕ್ಕೆ ಜಂಗಮವೆ ಪ್ರಾಣವೆಂದರಿಯರು ಕಾಣಾ ಕೂಡಲಚೆನ್ನಸಂಗಮದೇವಾ