ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರ್ಗತವಾದಂತೆ ಮುಗಿಲಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನವು ತನ್ನ ಲೀಲೆಯಿಂದೆ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯಾ ಅಖಂಡೇಶ್ವರಾ.