ಬೇಕು ಬೇಡೆನ್ನದ ಪ್ರಸಾದಿಯ ಕಾಯ ಲಿಂಗಾರ್ಪಿತ ಆ ಅರ್ಪಿತವೆ ಪ್ರಸಾದ ಅದೆ ಮತ್ತೆ ಮತ್ತೆ ಅರ್ಪಿತ ದರ್ಶನದಿಂದಾಯಿತ್ತು ಸ್ಪರ್ಶನದಿಂದಾಯಿತ್ತು. ಅರ್ಪಿಸಿ ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು. ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕ್ಕೆಂತೊ ?