ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು ಮನೆಯಲಿದ್ದ ಜಂಗಮವನುದಾಸೀನವ ಮಾಡಿದಡೆ ನಾನು ಬೆಂದೆನಯ್ಯಾ. ಆನು ಬೆಂದ ಬೇಗೆಯನರಿಯೆ ಕಾಣಾ ಕೂಡಲಸಂಗಮದೇವಾ. 411