ಬೊಬ್ಬೆಯ ಬಾಯಿ
ಬಾಚದ ಮಂಡೆ
ಮೀರಿದ ಶರಣಂಗಲ್ಲದೆ ಇಲ್ಲ. ಓಡಿನ ಊಟ
ಕಾಡಿನಲ್ಲಿ ಇಕ್ಕೆ
ಮೀರಿದ ಶರಣಂಗಲ್ಲದೆ ಇಲ್ಲ. ವಿರಕ್ತೋ ವಾsಥ ಯುಕ್ತೋ ವಾ ಸಸ್ತ್ರ್ಯಾದಿವಿಷಯೇಷ್ವಪಿ ಪಾಪೈರ್ನೈವ ಪ್ರಲಿಪ್ಯೇತ ಪದ್ಮಪತ್ರಮಿವಾಂಭಸಾ ಎಂದುದಾಗಿ
ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣರು ಮಲೆಯೊಳಗಿರ್ದಡೇನು ? ಮೊಲೆಯೊಳಗಿರ್ದಡೇನು ?