ಬೋಳೆಯನೆಂದು ನಂಬಬೇಡ ಢಾಳಕನವನು ಜಗದ ಬಿನ್ನಾಣಿ. ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ ಮಲುಹಣರವರಿಗಿತ್ತ ಪರಿ ಬೇರೆ. ಮುಕ್ತಿಯ ತೋರಿ ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.