ಬ್ರಹ್ಮ ತಲೆದೋರದಂದು, ವಿಷ್ಣು



Pages   (key to Page Status)   

Error: The pagelist tag can only be used in the Index: namespace
ಬ್ರಹ್ಮ ತಲೆದೋರದಂದು
ವಿಷ್ಣು ಉದಯಿಸದಂದು ರುದ್ರನವತರಿಸದಂದು
ಈರೇಳುಭುವನ ನೆಲೆಗೊಳ್ಳದಂದು ಸಪ್ತಸಾಗರಂಗಳುಕ್ಕಿ ಹರಿಯದಂದು
ಅಮೃತಮಥನವಿಲ್ಲದಂದು
ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ? ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ ಹಮ್ಮಿಲ್ಲದಿರ್ದನಂದು !