Pages(key to [[Help:Page Status{{!}}Page Status]])
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ ಪಂಚಾಧಿದೇವತೆಗಳಿಲ್ಲದಂದು ಈ ಪಂಚೈವರ ಲಯ ಗಮನಂಗಳಿಗೆ ಕಾರಣವಾದ ಶಿವಶಕ್ತಿಗಳಿಲ್ಲದಂದು ಈ ಶಿವ ಶಕ್ತಿಗಳಿಗೆ ಕಾರಣವಾದ ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣವೆಂಬ ನಿಃಕಲತತ್ವವಿಲ್ಲದಂದು ನೀನು ಶೂನ್ಯನಾಗಿರ್ದೆಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.