Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಭಕ್ತನಾಗಿ ಬಯಕೆಯ ಮಾಡಿ ನೋಡುವದು ಭಕ್ತಿಯ ಸ್ಥಲವಲ್ಲ. ಬಯಸಿ ಮಾಡುವುದೆ ಭಕ್ತಿಯ ಕೇಡು ಕೂಡಿಸಿ ಮಾಡುವುದೇ (ಕೂಟುಂಡು)? (ಸಾಯಸ)ವಿಲ್ಲದೆ ಸಮತೆಯ ಮಾಡಿ
ಬೋನವ ನೀಡಿಹೆನೆಂಬುದು ಸಜ್ಜನತ್ವದ ಕೇಡು. ಇಂಥ ಬಯಕೆಯ ಮಾಡಿ ನೀಡುವವನ ಭಕ್ತಿ ಬರಿಯ ಮಡಕೆಯನಟ್ಟು ಹೊರಗೆ ಹುಲಿಯೇದಿಸಿದಂತಾಯಿತ್ತು ? ಕಾಣಾ. ಅವನು ಭಕ್ತಿ ಜಪತಪನೇಮನಿತ್ಯ ಅನುಷಾ*ನಾರ್ಚನೆ ಷೋಡಶ ಉಪಚಾರವ ಮಾಡಿ ಮುಕ್ತಿಯ ಪಡೆದೆನೆಂದು ಗುರುವಿನಲ್ಲಿ ಆಜ್ಞೆಯ ಮಾಡಿಕೊಂಡು
ಸಮಯಾಚಾರಕ್ಕೆ ಜಂಗಮದೇವರ ತಂದು ಪ್ರಸಾದ ಕೃತ್ಯವೆಂದು ಕಟ್ಟು ಮಾಡಿ ತನ್ನಲ್ಲಿ ಇಟ್ಟುಕೊಂಡು ಆಯತದ ಅಗ್ಘವಣಿ ಆಯತವೆಂದು ಮಾಡುವನ್ನಕ್ಕ (ಶೀಲವೆರಿ) ಆ ಜಂಗಮದೇವರ ತಂದು ತನ್ನ ಮನೆಯಲ್ಲಿಟ್ಟುಕೊಂಡು
ಆ ಜಂಗಮಕ್ಕೆ ಇಚ್ಛಾಭೋಜನವ ನೀಡಿ ತೃಪ್ತಿಯಂ ಬಡಿಸಿ
ಮುಂದೆ ಕೃತ್ಯವ ಮಾಡುವುದೇ ಸತ್ಯ ಸದಾಚಾರ ಶೀಲ
ಧರ್ಮದ ನಡೆ ಧರ್ಮದ ನುಡಿ. ಇದು ತಪ್ಪದೇ ಒಪ್ಪುದು ಕಾಣಾ. ಇದರ ಅಂತುವನರಿಯದೆ ತನ್ನ ಮನೆಯ ಆಯತದ ಬೋನವಾಗುವನ್ನಕ್ಕ ಆ ಜಂಗಮದೇವರ ಹಸಿದು ಬಳಲಿಸು ಎಂದು ಆಯತವ ಕಟ್ಟಿಕೊಟ್ಟನೆ ನಿಮ್ಮ ಗುರುನಾಥನು ? ಇಂಥ ಕಟ್ಟಳೆಯ ಕಟ್ಟಿದಾತ ಗುರುವಲ್ಲ
ಕಟ್ಟಿಕೊಂಡಾತ ಭಕ್ತನಲ್ಲ
ಭವಿ. ಇಂತೀ ಗುರುವಲ್ಲ ನರನು
ಇಂತಿವರು ಭಕ್ತರಲ್ಲ. ಒಲಿದು ಭಕ್ತಿಯ ಮಾಡಿಹನೆಂದು ಭಕ್ತನ ಅಂತವನರಿಯದೆ ಮುಂದುಗಾಣದೆ ಕೃತ್ಯವ ಕಟ್ಟುವ ಗುರುವಿಗೆ ಹಿಂದೆ ಬಹ ನರಕ ಇವರಿಗೆ ಇಂದೇ ಅಘೋರನರಕ ಕಾಣಾ ಮಹಾದಾನಿ ಕೂಡಲಚೆನ್ನಸಂಗಮದೇವಯ್ಯಾ.