Pages   (key to Page Status)   


ಭಕ್ತನ ನಡೆ ಶುದ್ಧ
ಭಕ್ತನ ನುಡಿ ಶುದ್ಧ
ಭಕ್ತನ ತನು ಶುದ್ಧ
ಭಕ್ತನ ಮನ ಶುದ್ಧ
ಭಕ್ತನ ಭಾವ ಶುದ್ಧ
ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ
ನೀ ಒಲಿದ ಸದ್‍ಭಕ್ತನ ಕಾಯವೇ ಕೈಲಾಸವಯ್ಯ.