ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ ಭಕ್ತರಿಗಲ್ಲದೆ ಕೈಯಾನೆವೆಂಬಿರಿ ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ. ವಿಷಯಕ್ಕೆ ಇಕ್ಕಿ ಅಸುಗತಿಗಿಳಿಯದಿರಿ ಕೂಡಲಸಂಗನಶರಣರ ಒಡೆವೆಯ.