ಭಕ್ತಿಯ ಮರ್ಮವನರಿಯೆ ಜ್ಞಾನದ ಕುರುಹನರಿಯೆ ವೈರಾಗ್ಯದ ದೃಢವನರಿಯೆ ವಿರತಿಯ ಹೊಲಬನರಿಯೆ ಮುಕ್ತಿಯ ಪಥವನರಿಯೆ ಭಕ್ತಿ ಜ್ಞಾನ ವೈರಾಗ್ಯ ವಿರತಿಗಳಿಂದೆ ಮುಕ್ತರಾದ ಮಹಾಶರಣರ ತೊತ್ತಿನ ಮಗ ನಾನಯ್ಯ ಅಖಂಡೇಶ್ವರಾ.