ಭಕ್ತಿ ಎಳ್ಳನಿತಿಲ್ಲ ಯುಕ್ತಿಶೂನ್ಯನಯ್ಯಾ ನಾನು. ತನುವಂಚಕ ಮನವಂಚಕ ಧನವಂಚಕ ನಾನಯ್ಯಾ. ಕೂಡಲಸಂಗಮದೇವಾ ಒಳಲೊಟ್ಟೆ ಎನ್ನ ಮಾತು. 308