ಭವಬಂಧನ ದುರಿತಂಗಳ ಗೆಲುವಡೆ ಓಂ ನಮಃ ಶಿವಶರಣೆಂದಡೆ ಸಾಲದೆ ಹರ ಹರ ಶಂಕರ ಶಿವ ಶಿವ ಶಂಕರ ಜಯ ಜಯ ಶಂಕರ ಶರಣೆನುತ್ತಿದ್ದೇನೆ. ಎನ್ನ ಪಾತಕ ಪರಿಹರ ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ. 79