ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ ಅದು ತಾ ಮುನ್ನಿನಂತೆ ಇದ್ದಿತ್ತು. ಮುಂದೆ ಭಾವಿಸಬೇಡ ಕೂಡಬೇಡ ಕೂಡಿಹೆನೆಂಬ ಭಾವ ಮುನ್ನವೆ ಬೇಡ ಗುಹೇಶ್ವರಾ.