ಭಾವ ಭಾವಿಸಲುಂಟೆ ಭಾವಭಾವಿಸಲರಿಯದು.


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಭಾವ ಭಾವಿಸಲುಂಟೆ ಭಾವಭಾವಿಸಲರಿಯದು. ಅದೇನು ಕಾರಣ ? ಭಾವದಲ್ಲಿ ಭರಿತನಾಗಿ
ನೇತ್ರ ನೋಡಲುಂಟೆ ? ನೇತ್ರ ನೋಡಲರಿಯದು
ಅದೇನು ಕಾರಣ ? ನೇತ್ರೇಂದ್ರಿಯದ ಬಾಗಿಲಲ್ಲಿ ನಿಂದು ನೋಡುವನಾಗಿ. ಶ್ರೋತ್ರ ಕೇಳಲುಂಟೆ? ಶ್ರೋತ್ರ ಕೇಳಲರಿಯದು
ಅದೇನು ಕಾರಣ ? ಶ್ರೋತ್ರದ ಬಾಗಿಲಲ್ಲಿ ನಿಂದು ಕೇಳುವನಾಗಿ. ನಾಸಿಕ ಪರಿಮಳವರಿವುದೆ? ನಾಸಿಕ ಪರಿಮಳವರಿಯದು
ಅದೇನು ಕಾರಣ ? ನಾಸಿಕದ ಬಾಗಿಲಲ್ಲಿ ನಿಂದು ವಾಸಿಸುವ ತಾನಾಗಿ. ಜಿಹ್ವೆ ರುಚಿಯನರಿವುದೆ? ಜಿಹ್ವೆ ರುಚಿಯನರಿಯದು
ಅದೇನು ಕಾರಣ ? ಜಿಹ್ವೆಯ ಬಾಗಿಲಲ್ಲಿ ನಿಂದು ರುಚಿಯ ನಿಶ್ಚೈಸುವ ತಾನಾಗಿ. (ತ್ವಕ್ಕು ಸ್ಪರ್ಶಿಸಬಲ್ಲುದೆ ತ್ವಕ್ಕು ಸ್ಪರ್ಶಿಸಲರಿಯದು
ಅದೇನು ಕಾರಣ ? ತ್ವಕ್ಕಿನಲ್ಲಿ ನಿಂದು ಸ್ಪರ್ಶಿಸುವ ತಾನಾಗಿ) ಜಂತ್ರಂಗಳಾಡಬಲ್ಲವೆ? ಜಂತ್ರಂಗಳಾಡಲರಿಯವು
ಅದೇನು ಕಾರಣ ? ಜಂತ್ರಂಗಳನಾಡಿಸುವ ಯಂತ್ರವಾಹಕ ತಾನಾಗಿ. ಇದು ಕಾರಣ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಾಂಗಲಿಂಗಿ.