ಮಂತ್ರಯೋಗ, ಹಠಯೋಗ, ಲಯಯೋಗ,


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮಂತ್ರಯೋಗ
ಹಠಯೋಗ
ಲಯಯೋಗ
ಜ್ಞಾನಯೋಗ. ಇಂತೀ ಎಲ್ಲ ಯೋಗವನರಿದು ಮರೆದು ಭಕ್ತಿಯೋಗದ ಮೇಲೆ ನಿಂದು
ರಾಜಯೋಗದ ಮೇಲೆ ನುಡಿವುದು ಕಾಣಿರೆ ! ರಾಜಯೋಗದ ಮೇಲೆ ನಡೆವುದು ಕಾಣಿರೆ ! ವಾಗತೀತಂ ಮನೋ[s]ತೀತಂ ಭಾವತೀತಂ ನಿರಂಜನಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ ಎಂದುದಾಗಿ
ಶಿವ ಜೀವ ಲಿಂಗ ಪ್ರಾಣ
ಶಿವಯೋಗವೆಂಬುದೆ ಐಕ್ಯ. ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರು
ಕೂಡಲಚೆನ್ನಸಂಗಮದೇವ ?