ಮಜ್ಜನಕ್ಕೆರೆವರೆಲ್ಲ ಇದ್ದಲ್ಲಿ ಫಲವೇನು? ಮುದ್ರಾಧಾರಿಗಳಪ್ಪರಯ್ಯಾ. ಲಿಂಗದಲ್ಲಿ ನಿಷೆ*ಯಿಲ್ಲ ಜಂಗಮದಲ್ಲಿ ಪ್ರೇಮವಿಲ್ಲ ವೇಷಧಾರಿಗಳಪ್ಪರಯ್ಯಾ. ಲಾಂಛನ ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ ಗುಹೇಶ್ವರ ಮೆಚ್ಚನಯ್ಯಾ.